Saturday, March 04, 2006

ಕನ್ನಡ

ನಮ್ಮ ಭಾಷೆ ಮೇಲೆ ವ್ಯಾಮೊಹ ಇರಬೇಕೊ ಬೆಡವೊ? ಇತ್ತಿಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಿ ನೊಡಿದರು ಅಂಗ್ಲ ಭಾಷೆ ಮಾತಡುವ ಜನ. ನಾನು ಪಿಜ್ಜಾ ಕಾನ್ರರಗೆ ಹೊಗಿದ್ದೆ ನನ್ನ ಸ್ನೇಹಿತರ ಜೊತೆ. ಅವರೆಲ್ಲ ಪಿಜ್ಜಾ ತರೊಕ್ಕೆ ಹೆಳಿದರು. ನಾನು waiter ಗೆ ಸ್ವಲ್ಪ ಬಿಸಿ ನೀರು ಕೊಡು ಅಂತ ಕೆಳಿದೆ. ಹಾಂಗದ್ದಿದ್ದೆ ತಡ ಅವನು ನನ್ನ ಗುರಾಯಿಸಿ ಸುಮ್ಮನೆ ಹೊರೆಟು ಹೊದ. ನನಗೆ ಎನು ಅಂತ ಗೊತ್ತಗಲಿಲ್ಲ. ೨೦ ನಿಮಿಷ ಅದ ಮೇಲೆ ಅವನು ಪಿಜ್ಜಾ ತಂದ ಅದರೆ ಬಿಸಿ ನೀರು ತರಲಿಲ್ಲ. ಒಬ್ಬಳು ಹುಡುಗಿ ಬಂದು "How are you doing today? Is everything alright?" ಅಂತ ಕೆಳಿದಳು. ಅವಳಿಗೆ ನಾನು ಸ್ವಲ್ಪ ಬಿಸಿ ನೀರು ಕೊಡುತ್ತೀರ ಅಂತ ಕೇಳಿದೆ. ಅವಳು ಕೂಡ ಗುರಾಯಿಸ್ತಾ ನಿಂತಳು. ಆಗ ನನ್ನ ಸ್ನೇಹಿತನೊಬ್ಬ Can I have some hot water please? ಅಂತ ಕೇಳಿದ. ತೊಗೊಳಪ್ಪ ೨ ನಿಮಿಷದಲ್ಲಿ ಬಿಸಿ ನೀರು ತಂದು ಕೊಟ್ಟಳು. ಅವಳಿಗೆ ಹಾಗು ಅ ಹುಡುಗನಿಗೆ ಕನ್ನಡ ಬರುತ್ತದೆಯಂತೆ. ಆದರೂ ಎಕೆ ಇ ತಿರಸ್ಕಾರ?


ಯಾಕೆ ಜನ ಕನ್ನಡನ ಕಂಡರೆ ಹಾಗಡುತ್ತಾರೆ? ಇದಕ್ಕೆಲ್ಲಾ ಎನು ಕಾರಣ? ಭಾರತದಲ್ಲಿ ಎಲ್ಲಾ ಭಾಷೆಗಳ ಸ್ಥಿತಿನು ಹೀಗೆ ಇದೆಯಾ? ಬಹುಶ್ಯಹ ಇಲ್ಲ ಅನ್ನಿಸುತ್ತೆ. ಕನ್ನಡ ಕಲಿಕೆ ಮನೆಯಿಂದ ಶುರು ಅಗಬೆಕು. ತಂದೆ,ತಾಯಿ ಇಬ್ಬರು ಮಕ್ಕಳಿಗೆ ಕನ್ನಡ ಕಲಿಸಬೇಕು. ಹಾಗೆ ಮಾಡಬೇಕು ಅಂದರೆ ಅವರಿಬ್ಬರಿಗೆ ಕನ್ನಡ ಬರಬೇಕು ಹಾಗು ಕನ್ನಡದ ಬಗ್ಗೆ ಹೆಮ್ಮೆ ಇರಬೇಕು. ಕೆಲವರು ಪ್ರಶ್ನಿಸುತ್ತಾರೆ ಕನ್ನಡ ಕಲಿತರೆ ನನ್ಗೆ ಕೆಲಸ ಸಿಗುತ್ತಾ ಅಂತ? ನನ್ನ ದೂರದ ಸಂಬಧಿ ಪದವಿಯಲ್ಲಿ ಕನ್ನಡದಲ್ಲಿ ಸ್ವರ್ಣ ಪದಕ ಪಡೆದ. ಎಲ್ಲರೂ ಅವನನ್ನು ಕೇಳಿದ ಪ್ರಶ್ನೆ ಕನ್ನಡದಲ್ಲಿ ಸ್ವರ್ಣ ಪದಕ ಪಡೆದು ಎನು ಮಾಡುತ್ತೀಯ ಅಂತ? ಹೆಮ್ಮೆಪಟ್ಟು ಅವನನ್ನು ಹುರಿದುಂಬಿಸುವ ಬದಲು ಹಂಗಿಸುವುದು ಸರಿಯೆ? ಕನ್ನಡದಲ್ಲಿ ಸ್ವರ್ಣ ಪದಕ ಪಡೆಯುವುದು ಕಷ್ಟ. ತಂದೆ ತಾಯಿಯ ಗುರಿ ಮಗ/ಮಗಳು ಇಂಜಿನಿಯರ್ ಆಗಬೇಕು ಇಲ್ಲ ಅಂದರೆ ವ್ಯೆದ್ಯನಾಗಬೇಕು ಅಂತ ಇದರ ಜೊತೆಗೆ ಮಗ/ಮಗಳು ಕನ್ನಡಾನು ಸ್ವಲ್ಪ ಕಲಿಯಬೇಕು ಅಂತ ಆಸೆ ಪಡುವ ತಂದೆ ತಾಯಿ ಎಷ್ಟು ಮಂದಿ ಇದ್ದಾರೆ? ಓ ತಂದೆ ತಾಯಿಯರೆ ಮಗುವಿಗೆ ಅಂಗ್ಲ ಭಾಷೆ ಜೊತೆಗೆ ಸ್ವಲ್ಪ ಕನ್ನಡಾನು ಕಲಿಸಿ.

ಬಸವಣ್ಣ ಹಾಗು ಬಸವಕ್ಕ ಮೇಲೆ ಕಾಗುಣಿತ ತಪ್ಪಿದಲ್ಲಿ ಸ್ವಲ್ಪ ಹಾಗೆ ಓದುವಾಗ ತಿದ್ದಕೊಳಿ.

ಇಲ್ಲಿಗೆ ಇಂದಿನ ಕಾರ್ಯಕ್ರಮ ಮುಖ್ತಾಯವಾಯಿತು..ಇ ಕೆಟ್ಟ ಬ್ಲೊಗ ನೊಡಿ ಬೇಸರ ಆಗಿದ್ದಲ್ಲಿ ನನಗೆ ಇಷ್ಟವಾದ ಹಾಡನ್ನು ಕೇಳಿ ಆನಂದಿಸಿ..
http://www.musicindiaonline.com/p/x/.JyjknDNoS.As1NMvHdW/

7 Comments:

Blogger bhadra said...

ವಾಹ್! ಕನ್ನಡ! ನಿಮ್ಮ ಬ್ಲಾಗ್ ಸೂಪರ್ ಆಗಿದೆ.

10:14 PM  
Blogger Sree said...

ಕನ್ನಡ ಬರೋ waiters ಅರ್ಧ ಘಂಟೆ ತಡಮಾಡಲ್ಲ ರೀ, ತಂದು ನಿಮ್ಮ ಮುಂದೆ ಲೋಟ ಕುಕ್ಕಿ, ಕೆಕ್ಕರಿಸಿ ನೋಡ್ತಾರೆ ಅಷ್ಟೆ - ಈ ಪ್ರಾಣಿಗೆ ಇಲ್ಲೇನ್ ಕೆಲ್ಸ ಅಂತಾನೋ ಬಿಲ್ ಕೊಡೋ ಯೋಗ್ಯತೆ ಇದೆಯೋ ಇಲ್ಲ್ವೋ ಅಂತಾನೋ!
ಕನ್ನಡದಲ್ಲಿ ಪದವಿ ಪಡೆಯೋದು, ಅದನ್ನ ಗೌರವಿಸೋದು ಬಿಡಿ, ದಿನನಿತ್ಯ ಬಳಕೆಯಲ್ಲಿ ಕನ್ನಡವನ್ನ ಉಪ್ಯೋಗಿಸೋದಕ್ಕೆ ಏನ್ ರೋಗಾನೋ ಜನಕ್ಕೆ ಗೊತ್ತಿಲ್ಲ! ನಾವು ಅಭಿಮಾನಶೂನ್ಯ ಭಾಷಿಗರು ಅನ್ನೋದು ಕಹಿಸತ್ಯ ಆಗಿಬಿಟ್ಟಿದೆ! ಎಂಜಿನೀರಿಂಗೇ ಮಾಡ್ಲಿ, ಮೆಡಿಸಿನೇ ಓದ್ಲಿ, ಆದ್ರೆ ಭಾಷೆ ಎಲ್ಲಾರ್ಗೂ ಬೇಕಲ್ಲ್ವ! ಅದನ್ನ ಸರ್ಯಾಗಿ ಕಲ್ಸೋ ವ್ಯವಸ್ಥೆ, ಭಾಷೆ ಬಗ್ಗೆ ಅಭಿಮಾನ ಬರೋಹಾಗೆ ಮಾಡೋ ವ್ಯವಸ್ಥೆ ನಮ್ಮ ಶಿಕ್ಷಣ ಕ್ರಮದಲ್ಲಿ ಇಲ್ಲದೇರೋದೇ ಇದಕ್ಕೆ ಕಾರಣ ಅಂತ ಅನ್ನಿಸುತ್ತೆ...

ಆಂಗ್ಲ ಭಾಷೆ ಏನ್ ಕಲ್ಸ್ತಾರೆ ತಲೆಬುರುಡೆ! ಮಾತೃ ಭಾಷೆ ಸರ್ಯಾಗಿ ಕಲೀದೆರೋ ಈ ಎಡಬಿಡಂಗಿಗಳಿಗೆ ಯಾವ ಭಾಷೆಯ ಸಂವಿಧಾನನೂ ಅರ್ಥ ಆಗಲ್ಲ! ಎಲ್ಲಾ ಗಟ್ಟು ಹೊಡ್ದು ಪಾಸಾಗೋ ಪ್ರಾಣಿಗಳು!

P.S.,:ನಾನು ಬಸವಕ್ಕನೂ ಅಲ್ಲ, ಬಸವಣ್ಣನೂ ಅಲ್ಲ - ಆದ್ರಿಂದ ಕಾಗುಣಿತ ತಿದ್ದಿಕೊಂಡು ಓದ್ಲಿಲ್ಲ - ನಾಕ್ ದಿನ ಬರಹ ಉಪಯೋಗ್ಸಿದ್ರೆ ನಿಮಗೇ ಗೊತ್ತಾಗುತ್ತೆ(ಅದು ನೀವು ಸ್ಕೂಲ್ನಲ್ಲಿ ಸರ್ಯಾಗಿ ಕಾಗುಣಿತ ಕಲ್ತಿದ್ದ್ರೆ;)) ಬಿಡಿ:)

2:24 PM  
Blogger Manjesh said...

ello aa pizza corner angaDi.ge *Thames* nadi inda pipeline connection irbeku.
bahushaha ella pizza angaDigaLu interconnect aagirbeku.

vyAmoha ondu iddare saaladu. samaya bandaaga *adament*aagiyu irabeku. anta oLLe suvarNaavakaasha sikkAga biDbaardittu. table mele swalpa heavy *tip* itbittu, "yaake naanu keLiddre neeru koDlilla?" anta keLbekittu. aggressive aagi keLdidre ee nan makkLu *lets take it for granted* ankonDbiDtaare :(

btw..chamak song...adu nanna fav song kooda.

1:01 PM  
Blogger Anveshi said...

ಅಲ್ಲಾ ಸ್ವಾಮೀ, ಏನ್ಸಮಾಚಾರ...?
ನಿಮಗೆ ಬೆಂಗಳೂರು ಕನ್ನಡಿಗ ಅಂದ್ರೆ ಗೊತ್ತಿಲ್ವ?
ಮರಾಠಿಗರಲ್ಲಿ ಮರಾಠಿಯಲ್ಲಿ, ಆಂಧ್ರದವರಲ್ಲಿ ಪಕ್ಕಾ ತೆಲುಗುನಲ್ಲಿ, ತಮಿಳರಲ್ಲಿ ಅಚ್ಚ ತಮಿಳಿನಲ್ಲಿ, ಕನ್ನಡಿಗರಲ್ಲಿ ಪರಿಶುದ್ಧ ಇಂಗ್ಲಿಷ್ ನಲ್ಲಿ ಮಾತನಾಡುವವರು ಎಂಬ ಜೋಕೇ ಎಲ್ಲೆಡೆ ಓಕೆ ಆಗಿದೆಯಲ್ಲ....!

8:34 AM  
Blogger admin said...

ಇಂಥವರು ಬೆಂಗಳೂರಿನಲ್ಲಿ ಹೆಚ್ಚಿಕೊಳ್ಳಲು ನಮ್ಮವರೇ ಕಾರಣ. ಕನ್ನಡದಲ್ಲಿ ಮಾತಾಡ್ಲಿಲ್ಲ ಅಂದ್ರೆ ಸರಿಯಾಗಿ ಚುರುಕ್ ಮುಟ್ಟಿಸಬೇಕು. ಏನೇ ಆಗಲಿ ಹೊರಗೆ ಕನಡದಲ್ಲಿಯೇ ಮಾತಾಡುತ್ತೀನಿ ಅಂತ ಪ್ರತಿಯೊಬ್ಬ ಕನ್ನಡಿಗ ಮನೆಯಿಂದ ಹೊರಗೆ ಹೋಗೊವಾಗ ನಿರ್ಧರಿಸಿಕೊಂಡು ಹೊರಡಬೇಕು. ಓಂ ಕನ್ನಡಾಂಬೆ.

4:59 AM  
Blogger Karthik CS said...

ನಿಜವಾಗಲು ಇಂಥ ಜನ್ರನ್ನ ಕಂಡ್ರೆ ಮೈ ಉರ್ರ್ಯತ್ತೆ.. ಎಗ್ಗರಿಸಿ ಒದ್ಯಣ ಅನ್ಸತ್ತೆ.

ತಪ್ಪು ನಮ್ಮ ಜನದ್ದೇ ಬಿಡಿ .. ನಾವು ಸರಿಯಾಗಿದ್ದಿದ್ರೆ ಎಲ್ಲ ಸರಿ ಹೋಗ್ತಿತ್ತು.. ನಮ್ ಜನಕ್ಕೆ ಸ್ವಲ್ಪ ಸ್ವಾಭಿಮಾನ ಬೆಳೆಸೋ ರೀತಿಯಲ್ಲಿ ನಾವು ಮಾಡ್ಬೇಕು ..

ಕನಿಷ್ಟತಮ ಅಂತರಜಾಲದಲ್ಲಿ ಯಾವುದೇ ಕನ್ನಡಿಗನಿಗೆ ಖುಷಿ ಆಗೋ ಥರ ಬ್ಲಾಗ್ ಗಳು, ಪೋರ್ಟ್ಲ್ ಗಳು ಕನ್ನಡದಲ್ಲಿ ಬರ್ತಾ ಇವೆ.. ಬಹಳ ಸಂತೋಷ.. ಇನ್ನೂ ಹೀಗೇ ಬೆಳೆಸೋಣ..

1:19 PM  
Blogger ~mE said...

wonder if my post appeared..hey first you need to tell me kannada dalli heg type madodu antha..:) Nangu comment madbayku

3:36 AM  

Post a Comment

<< Home